¡Sorpréndeme!

ನೀವು ಸೈಲೆಂಟ್ ಆಗಿಲ್ಲ ಅಂದ್ರೆ, ನಾನು ವೈಲೆಂಟ್ ಆಗಬೇಕಾಗುತ್ತದೆ | Ravi d channannavar | Oneindia Kannada

2020-05-29 1 Dailymotion

ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಎಸ್ಪಿ ರವಿ ಚನ್ನಣ್ಣನವರ್.

ಬೆಂಗಳೂರು ಹೊರವಲಯ ಆನೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚು ರೌಡಿ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ನೇತೃತ್ವದಲ್ಲಿ ಆನೇಕಲ್ ಹಾಗೂ ಬನ್ನೇರುಘಟ್ಟ ಸರಹದ್ದಿಗೆ ಬರುವ ರೌಡಿ ಶೀಟರ್ ಗಳನ್ನು ಕರೆಸಿ ರೌಡಿ ಪೇರೆಡ್ ನಡೆಸುವ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಜನ ಅಪರಾಧ ಪ್ರಕರಣಗಳಲ್ಲಿ ರೌಡಿ ಶೀಟರ್ ಗಳಾಗಿ ಗುರುತಿಸಿಕೊಂಡಿದ್ದ 100 ಕ್ಕೂ ಹೆಚ್ಚು ರೌಡಿಗಳನ್ನು ಆನೇಕಲ್ ಪೋಲಿಸ್ ಠಾಣೆ ಬಳಿ ಕರೆಸಿ ಎಸ್ಪಿ ರವಿ ಡಿ ಚನ್ನಣ್ಣನವರ್ ರೌಡಿಗಳಿಗೆ ನೇರವಾಗಿ ನೀನು ಸೈಲೆಂಟ್ ಆಗದಿದ್ದರೆ ನಾನು ವೈಲೆಂಟ್ ಆಗಬೇಕಾಗತ್ತೆ ಎಂದು ವಾರ್ನಿಂಗ್ ನೀಡಿದ್ದಾರೆ.